ಕನ್ನಡ - ಕನ್ನಡ ಸಂಕ್ಷಿಪ್ತ ನಿಂಘಟು

ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಅಭಿವೃದ್ಧಿಪಡಿಸಲಾದ ಅಡಕಮುದ್ರಿಕೆ. ಬಹುಶಃ ಕನ್ನಡದ ಮೊಟ್ಟಮೊದಲ ನಿಂಘಟು ಅಡಕಮುದ್ರಿಕೆ. ಇದರಲ್ಲಿ ಬೇಕಾದ ಪದವನ್ನು ಕೀಲಿಸಿ ಅರ್ಥ ಹುಡುಕಬಹುದು. ಪದದ ಅರ್ಥದ ಜೊತೆಗೆ ವ್ಯಾಕರಣ ವಿಚಾರ ಹಾಗೂ ಸಮಾನಾರ್ಥಕ ಪದಗಳು ದೊರೆಯುತ್ತವೆ. ಸಮಾನಾರ್ಥಕ ಪದಗಳು ಮತ್ತೆ ಕೊಂಡಿಯಾಗಿದ್ದು, ಅದನ್ನು ಕ್ಲಿಕ್ಕಿಸುವ ಮೂಲಕ ಆ ಪದದ ಇತರೆ ಅರ್ಥಗಳನ್ನು ತಿಳಿದುಕೊಳ್ಳಬಹುದಾಗಿದೆ. ಇದರಿಂದಾಗಿ ಅರ್ಥ ಹುಡುಕುವ ಪ್ರಕ್ರಿಯೆ ಕೇವಲ ಒಂದು ಪದಕ್ಕೆ ಸೀಮಿತವಾಗದೆ ಆ ಪದದ ಅರ್ಥವ್ಯಾಪ್ತಿಗೆ ವಿಸ್ತಾರವಾಗುತ್ತದೆ. ವರ್ಣಮಾಲೆಯನ್ನು ನೀಡಲಾಗಿದ್ದು, ಅಕ್ಷರವನ್ನು ಕ್ಲಿಕ್ಕಿಸುವುದರ ಮೂಲಕ ಆ ಅಕ್ಷರದಿಂದ ನಿಂಘಟುವಿನಲ್ಲಿ ಇರುವ ಪದದ ಅರ್ಥಗಳನ್ನು ಹುಡುಕಿಕೊಳ್ಳಬಹುದು. ಹುಡುಕಿದ ಪದಗಳ ಪಟ್ಟಿ ಸಹ ಲಭ್ಯವಿದೆ. ಎಲ್ಲ ಪದಪಟ್ಟಿಗಳೂ ಅಕಾರಾದಿಯಲ್ಲಿ ವಿಂಗಡಣೆಗೊಂಡು ಪ್ರದರ್ಶಿತವಾಗುತ್ತವೆ.

ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - 560 018. ಇಲ್ಲಿ ಲಭ್ಯ.

kagapa.in bendrekrishnappa.in