ಕುಮಾರವ್ಯಾಸ ಭಾರತ ಅಡಕಮುದ್ರಿಕೆ

ಕರ್ನಾಟಕ ಸರ್ಕಾರ 1958ರಲ್ಲಿ ಪ್ರಕಟಿಸಿರುವ ಜನಪ್ರಿಯ ಆವೃತ್ತಿಯನ್ನು  ಆಧಾರವಾಗಿ ಬಳಸಿದೆ. ಹತ್ತು ಪರ್ವಗಳ 8430 ಪದ್ಯಗಳಿಗೆ ಗದ್ಯಾನುವಾದ, 893 ಪದ್ಯಗಳಿಗೆ ಗಮಕ, ಶೋಧನಾ ಸೌಲಭ್ಯ, ಗ್ರಂಥಸೂಚಿ, ಪರಾಮರ್ಶನ ಗ್ರಂಥಸೂಚಿ, 11,000ಕ್ಕೂ ಹೆಚ್ಚು ಪದಗಳ ಅರ್ಥಕೋಶ, ಗದುಗಿನ ಕುರಿತ ವಿಡಿಯೋ, ಕಾವ್ಯಗಳಲ್ಲಿನ ಗಾದೆಗಳ ಪಟ್ಟಿ, ಎರಡು ಪಿಎಚ್‍ಡಿ ನಿಬಂಧ, ಹಸ್ತಪ್ರತಿ ಚಿತ್ರಗಳನ್ನು ಅಡಕ ಮುದ್ರಿಕೆ ಒಳಗೊಂಡಿದೆ. ಇದು ಗಣಕದಲ್ಲಿ ಮಾತ್ರ ಬಳಸಬಹುದಾದ ಅಡಕಮುದ್ರಿಕೆ.
 

ಕೊಳ್ಳುವುದು ಹೇಗೆ?

ಇದರ ಬೆಲೆ ಒಂದು ಸಾವಿರ ರೂಪಾಯಿಗಳಾಗಿದ್ದು ಕನ್ನಡ ಗಣಕ ಪರಿಷತ್ತು, ಟೋಟಲ್‍ ಕನ್ನಡ ಡಾಟ್‍ ಕಾಮ್‍ ಮಳಿಗೆ ಹಾಗೂ ಇತರೆ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ನಮ್ಮಿಂದ ನೇರವಾಗಿ ಕೊಳ್ಳಬಯಸುವವರು ಖುದ್ದಾಗಿ ಅಥವಾ ಕೋರಿಯರ್‍ ಮೂಲಕ ಪಡೆಯಬಹುದು. ಹಣವನ್ನು ಡಿಡಿ ಮೂಲಕ ಕಳಿಸುವುದಾದರೆ "ಕನ್ನಡ ಗಣಕ ಪರಿಷತ್ತು, ಬೆಂಗಳೂರು" ಈ  ಹೆಸರಿಗೆ ಮಾಡಿಸಬೇಕು. ಕೊರಿಯರ್‍ ವೆಚ್ಚ ರೂ ಐವತ್ತು ಸೇರಿಸಿರಿ. ತಮ್ಮ ಪತ್ರದಲ್ಲಿ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿ, ದೂರವಾಣಿ ಸಂಖ್ಯೆ ಕಡ್ಡಾಯ.
 

ಬ್ಯಾಂಕ್‍ ವರ್ಗಾವಣೆ ಮಾಡುವವರಿಗೆ ಮಾಹಿತಿ:

ಕನ್ನಡ ಗಣಕ ಪರಿಷತ್ತು

ಭಾರತೀಯ ಸ್ಟೇಟ್‍ ಬ್ಯಾಂಕ್‍
ಉಳಿತಾಯ ಖಾತೆ 10309112702
ಐ.ಎಪ್‍.ಎಸ್.ಸಿ. ಕೋಡ್‍ : ಎಸ್‍ಬಿಐಎನ್‍0007484
ಕೋಟೆ ಶಾಖೆ, ಬೆಂಗಳೂರು 560002.

ತಮ್ಮ ವಿಳಾಸವನ್ನು kagapa@gmail.com ಈ ವಿಳಾಸಕ್ಕೆ ಕಳಿಸಿರಿ.

kagapa.in bendrekrishnappa.in