ಧ್ಯೇಯೋದ್ದೇಶಗಳು

1. ಕನ್ನಡ ತಂತ್ರಾಂಶಗಳನ್ನು ಅಭಿವೃದ್ದಿಪಡಿಸಲು ನೆರವಾಗುವುದು.

2. ಕನ್ನಡ ತಂತ್ರಾಂಶ ತಯಾರಕರ ಹಾಗೂ ಅದರ ಬಳಕೆದಾರರ ನಡುವಣ ಕೊಂಡಿಯಾಗಿ ಸಮನ್ವಯದಿಂದ ಒಟ್ಟಾರೆ ಕನ್ನಡ ತಂತ್ರಾಂಶಗಳಿಗೆ ಇರುವ ಅವಕಾಶಗಳನ್ನು ಹೆಚ್ಚಿಸುವುದು.

3. ಬಳಕೆದಾರರಿಗೆ ಐಪಯುಕ್ತವಾದ ಏಕರೂಪತೆಯಿರುವ ಕೀಲಿಮಣೆಯನ್ನು ರೂಪಿಸುವುದು. ಧ್ವನಿಗ್ರಹಣ, ಅಕ್ಷರಗ್ರಹಣ ಮುಂತಾದ ತಂತ್ರಾಂಶಗಳನ್ನು ಕನ್ನಡಕ್ಕೆ ಅನ್ವಯವಾಗುವಂತೆ ಸಿದ್ಧಪಡಿಸಲು ವ್ಯವಸ್ಥಿತ ಯೋಜನೆಗಳನ್ನು ರೂಪಿಸುವುದು.

4. ಕನ್ನಡದ ಕೆಲಸ ಮಾಡುತ್ತಿರುವ ಎಲ್ಲಾ ಸಂಸ್ಥೆಗಳನ್ನು ಒಂದು ಗಣಕ ಜಾಲಕ್ಕೆ ಜೋಡಿಸಿ ಮಾಹಿತಿ ವಿನಿಮಯಕ್ಕೆ ಅವಕಾಶ ಒದಗಿಸುವುದು.

5. ಗಡಿನಾಡು, ಹೊರನಾಡು, ವಿದೇಶಿ ಕನ್ನಡಿಗರ ನಡುವೆ ಸಂಪರ್ಕ ವ್ಯವಸ್ಥೆಯೊಂದನ್ನು ಕಲ್ಪಿಸುವುದು.

6. ಕನ್ನಡದ, ಕರ್ನಾಟಕದ ಕುರಿತು ಒಂದು ಬೃಹತ್ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು. ಗಣಕಕ್ಕೆ ಸಂಬಂಧಿಸಿದಂತೆ ಒಂದು ಪಾರಿಭಾಷಿಕ ಪದಕೋಶವನ್ನು ಸಿದ್ಧಪಡಿಸುವುದು.

7. ತನ್ನ ಆಡಳಿತದಲ್ಲಿ ಗಣಕಗಳ ಬಳಕೆಯ ಎಲ್ಲ ಸಂದರ್ಭಗಳಲ್ಲೂ ಸರ್ಕಾರವು ಕನ್ನಡವನ್ನು ಸಂರ್ಣವಾಗಿ ಬಳಸಬೇಕೆಂದು ಒತ್ತಾಯಿಸುವುದು.

8. ಕನ್ನಡದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ, ಸಂಶೋಧನೆಗಳನ್ನು ನಡೆಸುತ್ತಿರುವವರಿಗೆ ಗಣಕದ ಮೂಲಕ ಹೆಚ್ಚಿನ ನೆರವು ನೀಡಿಕೆ.

9. ಕನ್ನಡದ ಎಲ್ಲಾ ಸಾಹಿತ್ಯಕೃತಿಗಳನ್ನು ಅಡಕಮುದ್ರಿಕೆಗಳಲ್ಲಿ ಅಳವಡಿಸಿ ಅವು ಸುಲಭವಾಗಿ ದೊರೆಯುವಂತೆ ಮಾಡುವುದು.

10. ಗಣಕಗಳಲ್ಲಿ ಕನ್ನಡವನ್ನು ಸಮಗ್ರವಾಗಿ ಬಳಸುವ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿಯನ್ನು ಮೂಡಿಸಿ ಮಾಹಿತಿ ಕ್ರಾಂತಿಯ ಪ್ರಯೋಜನ ಎಲ್ಲರಿಗೂ ದೊರೆಯುವಂತೆ ಮಾಡುವುದು.

11. ಕನ್ನಡ ಹಾಗೂ ಕನ್ನಡ ಮಾಧ್ಯಮದ ಶಿಕ್ಷಣದಲ್ಲಿ ಗಣಕಗಳನ್ನು ಬಳಸಲು ಸೂಕ್ತವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು.

12. ಕನ್ನಡ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಒಂದು ಮಾಹಿತಿ ಆಕರವನ್ನು ನಿರ್ಮಿಸುವುದು.

13. ಕನ್ನಡದ ಎಲ್ಲಾ ನಿಂಟು, ವಿಶ್ವಕೋಶಗಳು ಮುಂತಾದವನ್ನು ಗಣಕಕ್ಕೆ ಅಳವಡಿಸಿ ಎಲ್ಲೆಡೆ ದೊರೆಯುವಂತೆ ಮಾಡುವುದು.

14. ಅಂತರಜಾಲದಲ್ಲಿ ಕನ್ನಡದ ತಾಣಗಳನ್ನು ಹೆಚ್ಚಾಗಿ ಏರ್ಪಡಿಸಿ ಅಲ್ಲೆಲ್ಲಾ ಕನ್ನಡ ಮಾಹಿತಿ ದೊರೆಯಲು ಅನುವು ಮಾಡಿಕೊಡುವುದು.

15. ಗಣಕದಲ್ಲಿ ಕನ್ನಡ ಬಳಕೆಯ ಕುರಿತಾದ ತರಬೇತಿಗೆ ವ್ಯವಸ್ಥೆಯನ್ನು ಮಾಡುವುದು. 16. ಸರ್ಕಾರದ ಆಡಳಿತದಲ್ಲಿ ಕನ್ನಡವನ್ನು ಗಣಕದ ಮೂಲಕ ಬಳಸಲು ಅಗತ್ಯವಾದ ನೆರವನ್ನು ನೀಡುವುದು.