ಕನ್ನಡ ಗಣಕ ಪರಿಷತ್ತಿಗೆ ಭೇಟಿ ನೀಡಿದ ಗಣ್ಯರ ಅಭಿಪ್ರಾಯಗಳು

ಹೇಳಲು, ಹೊಗಳಲು ಮಾತೇ ಬಾರದು, ಅಷ್ಟು ಚೆನ್ನಾಗಿದೆ.
                     - ನಾಗೇಶ ಹೆಗಡೆ, ಪತ್ರಕರ್ತರು, ಪರಿಸರ ತಜ್ಞರು, ವಿಜ್ಞಾನ ಲೇಖಕರು. (ಕನ್ನಡ ವಿಶ್ವಕೋಶದ ಡಿಜಿಟಲ್ ಆವೃತ್ತಿ ಬಗ್ಗೆ).
ಹೆಮ್ಮೆ ಅನಿಸಿತು. ಕನ್ನಡದಲ್ಲಿ ಇಂಥಾ ಕೆಲಸ ನಡೆದಿದೆಯೆಂದು.
                     - ಚಂದ್ರನಾಥ ಆಚಾರ್ಯ, ಖ್ಯಾತ ಕಲಾವಿದರು.
ಕನ್ನಡ ಭಾಷೆಗೆ ಅತ್ಯುತ್ತಮ ಸೇವೆ.
                     - ಪ್ರೊ ಎಚ್.ಎನ್. ಮಹಾಬಲ, ಗಣಕವಿಜ್ಞಾನ ಪ್ರಾಧ್ಯಾಪಕರು ಐಐಟಿ ಚೆನ್ನೈ ಮತ್ತು ಮಾಜಿ ಸಲಹೆಗಾರರು ಇನ್ಫೋಸಿಸ್.
                     - ಬೆಂಗಳೂರು.
ಕನ್ನಡ ಗಣಕ ಪರಿಷತ್ತಿನಲ್ಲಿ ಕುಳಿತು ಇಲ್ಲಿನ ಎಲ್ಲ ಸಾಧನೆಗಳನ್ನು ವಿವರವಾಗಿ ಗಮನಿಸಿದೆ. ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದೆ. ತುಂಬಾ ಸಂತೋಷವಾಯಿತು. ಇಂದು ಬಹಳಷ್ಟು ಇಲ್ಲಿ ಸಾಧಿತವಾಗಿದೆ. ಗಣಕ ಯಂತ್ರಕ್ಕೆ ಅಳವಡಿಸಿರುವ ಅನಂತ ಮಾಹಿತಿಯಿಂದ ಕನ್ನಡದ ಬಗೆಗಿನ ನನ್ನ ಜ್ಞಾನ ಪರಿಧಿ ವಿಸ್ತಾರವಾಯಿತು. ಇಲ್ಲಿ ಸಂಚಯಿಸಿರುವ ಮಾಹಿತಿ ಮತ್ತು ಅದರ ಪ್ರವರ್ತನ ನಿಜಕ್ಕೂ ಸಂಶೋಧಕರಿಗೂ ಪ್ರಯೋಜನಕಾರಿ. ಕನ್ನಡ ಈಗ ಬಹುಮುಖಿ. ಗಣಕ ಪರಿಷತ್ತಿಗೆ ಧನ್ಯವಾದಗಳು.
                     - ಪ್ರೊ ದೊಡ್ಡರಂಗೇಗೌಡ, ನಿರ್ದೇಶಕರು.
                     - ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ, ಶೇಷಾದ್ರಿಪುರ ಕಾಲೇಜು, ಬೆಂಗಳೂರು - 560 021..
ಕನ್ನಡ ಭಾಷೆಯನ್ನು ಆಧುನಿಕ ತಂತ್ರಜ್ಞಾನದ ಸವಾಲುಗಳನ್ನು ಜೀರ್ಣಿಸಿಕೊಳ್ಳಬಲ್ಲ ಶಕ್ತಿಯನ್ನಾಗಿ ರೂಪಿಸುತ್ತಿದ್ದೀರಿ. ತಮ್ಮ ಶ್ರಮಶೀಲ ಮತ್ತು ಪ್ರೀತಿಯುಕ್ತ ಸಾಹಸಕ್ಕೆ ನನ್ನ ಮತ್ತು ನನ್ನಂಥವರ ಮೆಚ್ಚುಗೆ - ಸಹಕಾರ ಸದಾ ಇರುತ್ತದೆ. ತಮಗೆ ಧನ್ಯವಾದಗಳು.
                     - ರಾಮಲಿಂಗಪ್ಪ ಟಿ. ಬೇಗೂರು.
ನಿಮ್ಮ ಯೋಜನೆಗಳು ಸಮೃದ್ಧವಾಗಿ ಬೆಳೆಯಲೆಂದು ಹಾರೈಸುತ್ತೇನೆ.
                     - ರಾಘವ ರೆಡ್ಡಿ, ವಿಜ್ಞಾನಿ..
                     - 6, Woodland Lane, Arcadia, CA 91006, USA.
ಈ ದಿನ ಸಂಜೆ ಗಣಕ ಪರಿಷತ್ತಿನಲ್ಲಿ ಕಳೆದ ಸುಮಾರು ಎರಡು ಗಂಟೆಗೂ ಹೆಚ್ಚಿನ ಸಮಯ ನನ್ನ ಪಾಲಿಗೆ ಅತ್ಯಮೂಲ್ಯವಾಗಿದೆ. ಪಂಪನ ಕೃತಿಗಳ ಮೂಲಕ ಆರಂವಾದ ನಮ್ಮ ಮಾತು ಗಣಕ ಯಂತ್ರವನ್ನು ಸಾಹಿತ್ಯ ಮತ್ತು ಇತಿಹಾಸಗಳ ಮಾಹಿತಿಗೆ ಬಳಸಿಕಳ್ಳಬಹುದಾದ ಸಾಧ್ಯತೆಗಳಲ್ಲಿ ಅಲ್ಪವಿರಾಮ ಕಂಡಿತು. ತಂತ್ರಾಂಶದ ಸದ್ಬಳಕೆಗೆ ಆಸಕ್ತ ಜನರು ಸಂಯೋಜಿತರಾಗಿ ಕಾರ್ಯನಿರತರಾದರೆ ಅದರ ಫಲ ನೂರ್ಕಾಲ ಕನ್ನಡ ಜನತೆಗೆ ಉಳಿಯುತ್ತದೆ. ....ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಇತಿಹಾಸ ಸಮಗ್ರವಾಗಿ ದಾಖಲಾಗಿ ಎಲ್ಲರ ನೆರವಿಗೆ ದೊರಕುವ ದಿನಗಳು ಬೇಗ ಬರಲಿ ಎಂಬ ಆಸೆ ನನ್ನದು.
                     - ಡಾ. ಎಚ್.ಎಸ್. ಗೋಪಾಲರಾವ್, ಖ್ಯಾತ ಇತಿಹಾಸ ತಜ್ಞರು.
ಅನಿರೀಕ್ಷಿತವಾಗಿ ಇಂದು ಗಣಕ ಪರಿಷತ್ತಿಗೆ ಬಂದಂತಾಯಿತು. ಅದೂ ಹೆಂಡತಿ ಮತ್ತು ತಂಗಿಯೊಂದಿಗೆ. ಕನ್ನಡ ವಿಶ್ವಕೋಶದ ಡಿವಿಡಿ ಕಂಡ ಮೇಲಂತೂ ಗಣಕ ಪರಿಷತ್ತು ಎಂಥ ಅದ್ಭುತವಾದ ಸಕಾಲಿಕ ಹಾಗೂ ಮೌಲ್ಯಯುತ ಕಾರ್ಯಮಾಡಿದೆ ಎಂಬುದರ ಅರಿವಾಯಿತು. ಗಣಕ ಪರಿಷತ್ತಿನ ಮುಂದಿನ ಯೋಜನೆಗಳೆಲ್ಲವೂ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
                     - ಬಿ.ಆರ್. ಲಕ್ಷ್ಮಣರಾವ್, ಖ್ಯಾತ ಕವಿಗಳು.
ಕನ್ನಡ ಗಣಕ ಪರಿಷತ್ತಿನ ಕಛೇರಿಗೆ ಇವೊತ್ತು ಸಂಜೆ ಭೇಟಿ ನೀಡಿದಾಗ, ಅಲ್ಲಿ ಸದ್ದುಗದ್ದಲವಿಲ್ಲದೆ ನಡೆಯುತ್ತಿರುವ ಕನ್ನಡಪರ ತಾಂತ್ರಿಕ ಕೆಲಸ ವಿಸ್ಮಯ ಮತ್ತು ಹೆಮ್ಮೆಯನ್ನು ಉಂಟುಮಾಡಿತು. ನಮ್ಮ ನುಡಿ ಪಡೆಯುತ್ತಿರುವ ಹೊಸ ಆಯಾಮದಿಂದ ಅದರ ಬಳಕೆಯ ಸಾಧ್ಯತೆಗಳು ವಿಶ್ವವ್ಯಾಪಿಯಾಗುವ ದಿವಸಗಳು ದೂರವಿಲ್ಲ. ಇದರಿಂದ ಸೃಜನಶೀಲ ಚಟುವಟಿಕೆಗಳು ಹೆಚ್ಚಾಗಲಿವೆ. ಇಂತಹ ಸಮಾಜೋಪಕಾರಕ ಕಾಯಕದಲ್ಲಿ ತೊಡಗಿರುವ ಕನ್ನಡ ಗಣಕ ಪರಿಷತ್ತಿನ ಎಲ್ಲ ಕಾರ್ಯಕರ್ತರಿಗೆ ಕನ್ನಡಿಗರ ಕೃತಜ್ಞತಾಪೂರ್ವಕ ಧನ್ಯವಾದಗಳು ಸಲ್ಲುತ್ತವೆ.
                     - ಪದ್ಮಶ್ರೀ ನಾಡೋಜ ಪ್ರೊ ಕೆ.ಎಸ್. ನಿಸಾರ್ ಅಹಮದ್.
kagapa.in bendrekrishnappa.in