ಕನ್ನಡ ವಿಶ್ವಕೋಶ 2006

ಕಳೆದ ಮೂರು ದಶಕಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಹೊರತಂದ 14 ಸಂಪುಟಗಳ ಕನ್ನಡ ವಿಶ್ವಕೋಶ ಕನ್ನಡದ ಹೆಗ್ಗಳಿಕೆಗಳಲ್ಲಿ ಒಂದು. ಸುಮಾರು 50000 ಪುಟಗಳಷ್ಟು ಪಠ್ಯವಿರುವ ಈ ಅಮೂಲ್ಯ ವಿಶ್ವಕೋಶವನ್ನು ಕನ್ನಡ ಗಣಕ ಪರಿಷತ್ತು ಬಹುಮಾಧ್ಯಮ ಅಡಕಮುದ್ರಿಕೆಯನ್ನಾಗಿ ಅಭಿವೃದ್ಧಿಪಡಿಸಿದೆ. ವಿಜ್ಞಾನದ ಲೇಖನಗಳೂ ಸೇರಿದಂತೆ ಅನೇಕ ವಿಷಯಗಳ ಕುರಿತ ಲೇಖನಗಳು ಪರಿಷ್ಕೃತವಾಗಿರುವುದು, ಹೊಸ ಲೇಖನಗಳಿರುವುದು ಅಡಕ ಮುದ್ರಿಕೆಯು ಮುದ್ರಿತ ಆವೃತ್ತಿಗಿಂತ ಹೆಚ್ಚು ಪ್ರಸ್ತುತವಾಗುವಂತೆ ಮಾಡಿದೆ. ಈ ಆಂಕಿಕ ವಿಶ್ವಕೋಶದಲ್ಲಿ 14,791 ಲೇಖನಗಳು, 9,610 ಚಿತ್ರಗಳು, 58 ಧ್ವನಿ ತುಣುಕುಗಳು, 18 ಅನಿಮೇಷನ್ಗಳು ಮತ್ತು ಎಲ್ಲಕ್ಕೂ ಹೆಚ್ಚಾಗಿ 382 ವಿಶಿಷ್ಟ ವಿಡಿಯೋಗಳಿವೆ. ಈ ವಿಡಿಯೋಗಳಲ್ಲಿ ಅನೇಕವು ಹೊರಗೆ ಲಭ್ಯವಿಲ್ಲದಂತಹವು. ವಿಶ್ವಕೋಶಕ್ಕಾಗಿ ವಿಶೇಷವಾಗಿ ಅನುಮತಿ ಪಡೆದುಕೊಂಡು ಇವುಗಳನ್ನು ಸೇರಿಸಲಾಗಿದೆ. ಕುತೂಹಲಕ್ಕಾಗಿ ಈ ವಿಶ್ವಕೋಶದಲ್ಲಿನ ಪದಗಳನ್ನು ಗಣಿಸಿದಾಗ ಸಿಕ್ಕಸಂಖ್ಯೆ 75,05,585!

ತಾಂತ್ರಿಕವಾಗಿ ವಿಶ್ವಕೋಶ ಅಡಕಮುದ್ರಿಕೆಯು ಒಂದು ಅದ್ಭುತ. ಜಾಗತೀಕರಣದ ಈ ದಿನಗಳಲ್ಲಿ ವಿಜ್ಞಾನವನ್ನು ನಮ್ಮ ಭಾಷೆ, ಸಂಸ್ಕೃತಿಗಳಿಗೆ ಹೊಂದಿಕೊಳ್ಳುವಂತೆ ಅಭಿವೃದ್ಧಿ ಪಡಿಸದಿದ್ದರೆ ನಮ್ಮ ಭಾಷೆಯನ್ನೇ ನಾವು ಕಳೆದುಕೊಳ್ಳಬೇಕಾಗುತ್ತದೆ. ಈ ವಿಶ್ವಕೋಶದ ಅಭಿವೃದ್ಧಿ ಕಕನ್ನಡಕ್ಕೆ ಇಂತಹ ಭಯ ಇಲ್ಲ ಹಾಗೂ ತಂತ್ರಜ್ಞಾನವನ್ನು ಕನ್ನಡಕ್ಕೆ ಬಳಸಲು ಯಾವ ತೊಂದರೆಗಳೂ ಇಲ್ಲಕಿ ಎಂಬುದನ್ನು ಶ್ರುತಪಡಿಸುತ್ತದೆ.  ಈ ಮಹತ್ತರ ತಾಂತ್ರಿಕ ಸಾಧನೆಯನ್ನು  ಆಗಮಾಡಿಸಿದ್ದು, ಮುಖ್ಯವಾಗಿ ಕನ್ನಡ ಗಣಕ ಪರಿಷತ್ತಿನ  ತಂತ್ರಜ್ಞರಾದ  ಶ್ರೀ ವಿ.ಸುಬ್ರಮಣ್ಯ ಮತ್ತು ಶ್ರೀ ರಾಜಕೃಷ್ಣ ಅವರು. ಇವರಿಗೆ ಪಠ್ಯನಿರ್ವಹಣೆ, ಚಿತ್ರ, ಧ್ವನಿ, ವಿಡಿಯೋ ಸಂಸ್ಕರಣೆಗಳಲ್ಲಿ ನೆರವಾದವರು ಅಭಿಷೇಕ್ ಮತ್ತು ಸಂಗಡಿಗರು. ನೇಪಥ್ಯದಲ್ಲಿ ಇನ್ನೂ ಅನೇಕರ ಸಹಕಾರ ಹಾಗೂ ಶ್ರಮ ಒಂದು ಮಾಯಾಜಾಲವನ್ನೇ ನಿರ್ಮಿಸಿದೆ. ಸಾಮಾನ್ಯವಾಗಿ ವಿದ್ಯುನ್ಮಾನ ಪಠ್ಯದಲ್ಲಿ ವಿವರಣೆಗಳಿರುವ ಪದ/ವಿಷಯಗಳಿಗೆ ಕೊಂಡಿಯಿರುತ್ತದೆ (ಹೈಪರ್ಲಿಂಕ್). ವಿಶ್ವಕೋಶದ ವಿಶೇಷತೆಯೆಂದರೆ ಇಲ್ಲಿ ಆಯ್ಕೆಮಾಡಿದ ಯಾವುದೇ ಪ್ರತಿ ಪದಗಳು ಸ್ವತಂತ್ರವಾಗಿ ಹೈಪರ್ಲಿಂಕ್ಆಗಿ ಮಾಡಲಾಗಿದೆ! ನೀವು ಯಾವ ಪದದ ಮೇಲೆ ಕ್ಲಿಕ್ಮಾಡಿದರೂ ಆ ವಿಷಯಕ್ಕೆ ಹೋಗುತ್ತದೆ ಅಥವಾ ಆ ಪದದಿಂದ ಆರಂಭವಾಗುವ ಲೇಖನಗಳ ಪಟ್ಟಿಯನ್ನು ನೀಡುತ್ತದೆ. ಇದು ವಿಶ್ವಕೋಶದ ಮತ್ತೊಂದು ಹೆಗ್ಗಳಿಕೆ. ಪಠ್ಯವನ್ನು ನಿರ್ವಹಿಸಲು ಹಾಗೂ ವಿಂಡೋಸ್ನ ಕಾರ್ಯಾಚರಣ ವ್ಯವಸ್ಥೆಯ ವಿವಿಧ ಆವೃತ್ತಿಗಳಲ್ಲಿ (98, 2000, ಎಂಇ, ಎಕ್ಸ್ಪಿ) ಬಳಕೆದಾರರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ಜರ್ಮನ್ ತಂತ್ರಾಂಶವನ್ನು ಬಳಸಲಾಗಿದೆ. ಹಾಗೆಯೇ ಆಡಿಯೋ ಮತ್ತು ವಿಡಿಯೋಗಳೂ ಅನೇಕ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಲಾಗಿದೆ. ವಿಶ್ವಕೋಶ ಸ್ಪಷ್ಟವಾಗಿ ಕಾಣಲು ತೆರೆಯು ತಂತಾನೆ ಹೊಂದಿಕೊಳ್ಳುತ್ತದೆ ಹಾಗೂ ವಿಶ್ವಕೋಶದಿಂದ ನಿರ್ಗಮಿಸಿದ ನಂತರ ತೆರೆ ಮತ್ತೆ ಹಿಂದಿನಂತಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ, ವಿಶ್ವಕೋಶವನ್ನು ಗಣಕದಲ್ಲಿ ವಿಶ್ವಕೋಶವನ್ನು ಅನುಸ್ಥಾಪಿಸುವ ಪ್ರಕ್ರಿಯೆಸರಾಗಬಾಗಿರಬೇಕೆಂದು ಆಬ್ಜೆಕ್ಟ್  ಪ್ಯಾಸ್ಕಲ್ ಸ್ಕ್ರಿಪ್ಟ್ ಬಳಸಲಾಗಿದೆ. ಹೀಗಾಗಿ ವಿಶ್ವಕೋಶ ಅನೇಕ ತಾಂತ್ರಿಕ ವೈಶಿಷ್ಟ್ಯಗಳನ್ನೊಳಗೊಂಡು ಒಂದು ಬಹುಮಾಧ್ಯಮ ಅಡಕಮುದ್ರಿಕೆಯಾಗಿ ಹೊರಹೊಮ್ಮಿದೆ.

ಬೆಲೆ ರೂ 500. ಒಂದು ಡಿವಿಡಿ. ಕನ್ನಡ ಗಣಕ ಪರಿಷತ್ತು, 64/2, ಒಂದನೇ ಮುಖ್ಯರಸ್ತೆ, ಮೂರನೇ ತಿರುವು, ಚಾಮರಾಜಪೇಟೆ, ಬೆಂಗಳೂರು - 560 018. ನವಕರ್ನಾಟಕ ಪ್ರಕಾಶನ ಹಾಗೂ ಇತರೆ ಕೆಲವು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

ಕೊಳ್ಳುವುದು ಹೇಗೆ?
ಇದರ ಬೆಲೆ ಬೆಲೆ ರೂ 500. ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ, ಕನ್ನಡ ಗಣಕ ಪರಿಷತ್ತು, ಟೋಟಲ್‍ ಕನ್ನಡ ಡಾಟ್‍ ಕಾಮ್‍ ಮಳಿಗೆ ಹಾಗೂ ಇತರೆ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ನಮ್ಮಿಂದ ನೇರವಾಗಿ ಕೊಳ್ಳಬಯಸುವವರು ಖುದ್ದಾಗಿ ಅಥವಾ ಕೋರಿಯರ್‍ ಮೂಲಕ ಪಡೆಯಬಹುದು. ಹಣವನ್ನು ಡಿಡಿ ಮೂಲಕ ಕಳಿಸುವುದಾದರೆ "ಕನ್ನಡ ಗಣಕ ಪರಿಷತ್ತು, ಬೆಂಗಳೂರು" ಈ  ಹೆಸರಿಗೆ ಮಾಡಿಸಬೇಕು. ಕೊರಿಯರ್‍ ವೆಚ್ಚ ರೂ ಐವತ್ತು ಸೇರಿಸಿರಿ. ತಮ್ಮ ಪತ್ರದಲ್ಲಿ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿ, ದೂರವಾಣಿ ಸಂಖ್ಯೆ ಕಡ್ಡಾಯ.

ಬ್ಯಾಂಕ್‍ ವರ್ಗಾವಣೆ ಮಾಡುವವರಿಗೆ ಮಾಹಿತಿ:
ಕನ್ನಡ ಗಣಕ ಪರಿಷತ್ತು,
ಭಾರತೀಯ ಸ್ಟೇಟ್‍ ಬ್ಯಾಂಕ್‍, ಉಳಿತಾಯ ಖಾತೆ 10309112702, ಐ.ಎಫ್.ಎಸ್.ಸಿ. ಕೋಡ್‍ ಎಸ್ಬಿಯಐಎನ್‍0007484, ಕೋಟೆ ಶಾಖೆ, ಬೆಂಗಳೂರು 560002. ತಮ್ಮ ವಿಳಾಸವನ್ನು kagapa@gmail.com ಈ ವಿಳಾಸಕ್ಕೆ ಕಳಿಸಿರಿ.

 

kagapa.in bendrekrishnappa.in