ನಿಸಾರ್ ಸಮಗ್ರ ನೋಟ ಅಡಕ ಮುದ್ರಿಕೆ

ನಿತ್ಯೋತ್ಸವದ ಕವಿ ಎಂದೇ ಹೆಸರಾದ ನಾಡೋಜ, ಪದ್ಮಶ್ರೀ ಪ್ರೊ ಕೆ.ಎಸ್.ನಿಸಾರ್ ಅಹಮದ್ ಅವರ ಸಮಗ್ರ ಸಾಹಿತ್ಯವನ್ನು ಬಹುಮಾಧ್ಯಮ ರೂಪದಲ್ಲಿ ಪ್ರಸ್ತುತಗೊಳಿಸಲಾಗಿದೆ. ಕವಿಯು ಸೃಜಿಸಿದ ಸಮಗ್ರ ಬರಹಗಳನ್ನು ವಿದ್ಯುನ್ಮಾನ ರೂಪದಲ್ಲಿ ಪ್ರಸ್ತುತಪಡಿಸಿರುವುದು ಇದೇ ಮೊದಲು. ಇದರಲ್ಲಿ ಸಾಹಿತ್ಯ ಮಾತ್ರವಲ್ಲದೆ, ಕವಿಯ ಜೀವನ ಕುರಿತ ಚಿತ್ರಗಳು, ಅವರ 80 ಹಾಡುಗಳ ಆಡಿಯೋ ಲಭ್ಯವಿದೆ. ವಿಡಿಯೋ ವಿಭಾಗದಲ್ಲಿ ನಿಸಾರ್ ಕುರಿತ ಗಣ್ಯ ಸಾಹಿತಿಗಳ ಅಭಿಪ್ರಾಯ ಹಾಗೂ ನಿಸಾರ್ ಅವರ ಅನುವಾದಿತ ಶೇಕ್ಸ್ಪಿ ಯರ್ ನಾಟಕಗಳ ಸಂಭಾಷಣೆಯನ್ನು ನಟ, ರಂಗಕರ್ಮಿ ಶ್ರೀ ಸಿ.ಆರ್. ಸಿಂಹ ಅವರು ಸೊಗಸಾದ ಧ್ವನಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಇದೂ ಒಂದು ಸಂಗ್ರಾಹ್ಯ ಅಡಕಮುದ್ರಿಕೆ.

ಕೊಳ್ಳುವುದು ಹೇಗೆ?
ಇದರ ಬೆಲೆ ಬೆಲೆ ರೂ 200. ರೂಪಾಯಿಗಳಾಗಿದ್ದು ಕನ್ನಡ ಗಣಕ ಪರಿಷತ್ತು, ಟೋಟಲ್‍ ಕನ್ನಡ ಡಾಟ್‍ ಕಾಮ್‍ ಮಳಿಗೆ ಹಾಗೂ ಇತರೆ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತದೆ. ನಮ್ಮಿಂದ ನೇರವಾಗಿ ಕೊಳ್ಳಬಯಸುವವರು ಖುದ್ದಾಗಿ ಅಥವಾ ಕೋರಿಯರ್‍ ಮೂಲಕ ಪಡೆಯಬಹುದು. ಹಣವನ್ನು ಡಿಡಿ ಮೂಲಕ ಕಳಿಸುವುದಾದರೆ "ಕನ್ನಡ ಗಣಕ ಪರಿಷತ್ತು, ಬೆಂಗಳೂರು" ಈ  ಹೆಸರಿಗೆ ಮಾಡಿಸಬೇಕು. ಕೊರಿಯರ್‍ ವೆಚ್ಚ ರೂ ಐವತ್ತು ಸೇರಿಸಿರಿ. ತಮ್ಮ ಪತ್ರದಲ್ಲಿ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿ, ದೂರವಾಣಿ ಸಂಖ್ಯೆ ಕಡ್ಡಾಯ.

ಬ್ಯಾಂಕ್‍ ವರ್ಗಾವಣೆ ಮಾಡುವವರಿಗೆ ಮಾಹಿತಿ:
ಕನ್ನಡ ಗಣಕ ಪರಿಷತ್ತು,
ಭಾರತೀಯ ಸ್ಟೇಟ್‍ ಬ್ಯಾಂಕ್‍, ಉಳಿತಾಯ ಖಾತೆ 10309112702, ಐ.ಎಫ್.ಎಸ್.ಸಿ. ಕೋಡ್‍ ಎಸ್ಬಿಯಐಎನ್‍0007484, ಕೋಟೆ ಶಾಖೆ, ಬೆಂಗಳೂರು 560002. ತಮ್ಮ ವಿಳಾಸವನ್ನು kagapa@gmail.com ಈ ವಿಳಾಸಕ್ಕೆ ಕಳಿಸಿರಿ.

 

 

kagapa.in bendrekrishnappa.in