ಹಿಂದಿನ ಸುದ್ದಿ-ಸಮಾಚಾರಗಳು

ನುಡಿ 4.0 - ಡಿಸೆಂಬರ್ 12, 2003 ರಂದು ಬಿಡುಗಡೆಯಾಗಿದೆ.

ಕರ್ನಾಟಕವು ಸರ್ಕಾರವು ಈಗಾಗಲೇ ವ್ಯಾಪಕವಾಗಿ ಬಳಸುತ್ತಿರುವ ಕನ್ನಡ `ನುಡಿ' ಲಿಪಿ ತಂತ್ರಾಂಶದ ನಾಲ್ಕನೆಯ ಆವೃತ್ತಿಯ ಬಿಡುಗಡೆ ಸಮಾರಂಭವನ್ನು ದಿನಾಂಕ 12.12.2003 ನೇ ಶುಕ್ರವಾರ ವಿಧಾನ ಸೌಧದಲ್ಲಿ ಏರ್ಪಡಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಡಿ.ಬಿ. ಇನಾಂದಾರ್ ಅವರು ನುಡಿ ತಂತ್ರಾಂಶದ 4ನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಇದಿನಬ್ಬ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಉಷಾಗಣೇಶ್, ಮಾಹಿತಿ ತಂತ್ರಜ್ಞಾನದ ನಿರ್ದೇಶಕ ಶ್ರೀ ಜಾವೇದ್ ಅಖ್ತರ್ ಮುಂತಾದ ಅನೇಕ ಹಿರಿಯ ಸರ್ಕಾರಿ ಅಧಿಕಾರಿಗಳು ಈ ಸಮಾರಂಭದಲ್ಲಿ ಹಾಜರಿದ್ದರು.

ವೈಶಿಷ್ಟ್ಯ (ಹೊಸತು): 
ಯೂನಿಕೋಡ್ ಶಿಷ್ಡತೆ ಅಳವಡಿಕೆ. ಪದಪರೀಕ್ಷೆ ಸೌಲಭ್ಯ (ನುಡಿ ಮತ್ತು ಎಂ ಎಸ್ ವರ್ಡ್ಗಳಲ್ಲಿ). ಹೊಸ ಅಕ್ಷರ ಶೈಲಿಗಳು - ಜಾಲತಾಣಗಳಿಗಾಗಿಯೇ ಕೆಲ ಅಕ್ಷರಶೈಲಿಗಳು.

`ಸರಳ ನುಡಿ' - `ನುಡಿ'ಯ ಸಂಕ್ಷಿಪ್ತ ಆವೃತ್ತಿ (ಅಂತರಜಾಲ ತಾಣದ ದೃಷ್ಟಿಯಿಂದ)

ತಂತ್ರಾಂಶ ಅಭಿವೃದ್ಧಿ ಸಲಕರಣೆಗಳು - ಹೊಸ ಸಲಕರಣೆಗಳು ಮತ್ತು ಸುಧಾರಿತ ಆವೃತ್ತಿ.

ಕನ್ನಡ-ಕನ್ನಡ ಸಂಕ್ಷಿಪ್ತ ನಿಂಟು ಅಡಕ ಮುದ್ರಿಕೆ : 
ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಸಿದ್ಧಪಡಿಸಿದೆ. ಸಾರ್ವಜನಿಕರಿಗೆ ಅಲ್ಲಿ ಲಭ್ಯವಿದೆ. ಬೆಲೆ ರೂ.100/-
ಅತತ್ಯುತ್ತಮ ಶೋಧನ ವ್ಯವಸ್ಥೆಯೊಂದಿಗೆ 1500 ಪುಟಗಳ ಮಾಹಿತಿ. 45000 ಪದಗಳು, ಅರ್ಥಗಳು, ಸಮಾನಾರ್ಥಕ ಪದಗಳು ಲಭ್ಯ.

ಕನ್ನಡ ಗ್ರಂಥಸಂಪದ ಅಂತರ ಜಾಲ ತಾಣದ ಉದ್ಾಟನೆ ಫೆಬ್ರವರಿ 2004: 
ಕನ್ನಡದ ಎಲ್ಲ ಪುಸ್ತಕಗಳ ವಿವರಗಳನ್ನು ಒದಗಿಸಬೇಕೆಂಬ ಆಶಯದೊಂದಿಗೆ ಮೂಡಿಬರುತ್ತಿರುವ ತಾಣ. ಪುಸ್ತಕಗಳ ಬಗೆಗೆ ಮಾಹಿತಿಯನ್ನು ಒದಗಿಸಲು ಎಲ್ಲರಿಗೂ ಸ್ವಾಗತ.

ಕನ್ನಡ ಅಕ್ಷಯ ಮಾಹಿತಿ ಸಂಚಯ: 
ಈಗಾಗಲೇ ಅಸ್ತಿತ್ವದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಮನವಿಯನ್ನು ನೋಡಿ.

ಪಂಪನ ಕೃತಿಗಳು-ಅಡಕ ಮುದ್ರಿಕೆ (ಸಿಡಿ) ಬಿಡುಗಡೆ: ನವಂಬರ್ 2005 ರಲ್ಲಿ.

ಮುಕ್ತ ಕಛೇರಿ - ಕನ್ನಡ ಆವೃತ್ತಿ ಬಿಡುಗಡೆ ಡಿಸೆಂಬರ್ 2005: 

 

kagapa.in bendrekrishnappa.in