ಗಣಕೀಕರಣ ಮತ್ತು ಕನ್ನಡ

ಗಣಕೀಕರಣ ಮತ್ತು ಕನ್ನಡ - ಕರ್ನಾಟಕ ಸರ್ಕಾರದ ಸಾಧನೆಗಳು

ಕಳೆದ ಮೂರು ವರ್ಷಗಳಿಂದ ಕರ್ನಾಟಕ ಸರ್ಕಾರವು ತೆಗೆದುಕೊಳ್ಳುತ್ತಿರುವ ಐತಿಹಾಸಿಕ ತೀರ್ಮಾನಗಳು ಗಣಕಗಳಲ್ಲಿ ಕನ್ನಡದ ಬಳಕೆಯಲ್ಲಿ ಇರುವ ಹಲವಾರು ಪ್ರಮುಖ ಹಾಗೂ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ದಾರಿಯಾಗಿದೆ. ತಾನು ಬಳಸುವ ಕನ್ನಡ ಲಿಪಿ ತಂತ್ರಾಂಶಗಳಿಗೆ ಶಿಷ್ಟತೆ ಮತ್ತು ಏಕರೂಪತೆಗಳು ಇರಬೇಕೆಂಬುದನ್ನು ಕರ್ನಾಟಕ ಸರ್ಕಾರವು ತೀವ್ರವಾಗಿ ಪರಿಗಣಿಸಿದ್ದು ಈ ಬೆಳವಣಿಗೆಗಳಿಗೆ ನಾಂದಿಯಾಯಿತು. ಈ ದಿಸೆಯಲ್ಲಿ, ಕನ್ನಡ ತಂತ್ರಾಂಶಗಳು ಬಳಸಬೇಕಾದ ಕನ್ನಡ ಅಕ್ಷರಭಾಗಗಳು ಮತ್ತು ಇವುಗಳಿಗೆ ಂಖಅ ಸಂಕೇತಗಳನ್ನು ನಿಗದಿಪಡಿಸಲು ಕರ್ನಾಟಕ ಸರ್ಕಾರವು 2000 ನೇ ಇಸವಿ ಮೇ ತಿಂಗಳಿನಲ್ಲಿ ಒಂದು ತಾಂತ್ರಿಕ ಸಮಿತಿಯನ್ನು ನೇಮಿಸಿತು. ಸಮಿತಿಯು 2000 ನೇ ನವೆಂಬರ್ ತಿಂಗಳಲ್ಲಿ ಸಲ್ಲಿಸಿದ ವರದಿಯಂತೆ, ಎಲ್ಲಾ ಕನ್ನಡ ಲಿಪಿ ತಂತ್ರಾಂಶಗಳು ಹೊಂದಿರಬೇಕಾದ ಅಕ್ಷರಭಾಗಗಳು ಮತ್ತು ಇವುಗಳಿಗೆ ಂಖಅ ಸಂಕೇತಗಳನ್ನು ನಿಗದಿಪಡಿಸಿ ಕಡ್ಡಾಯಗೊಳಿಸಿರುವುದೇ ಕರ್ನಾಟಕ ಸರ್ಕಾರದ ಈ ಪ್ರಮುಖ ಹೆಜ್ಜೆಯಾಗಿದೆ.
 

ಈ ಮಧ್ಯೆ, ಕನ್ನಡ ಲಿಪಿ ತಂತ್ರಾಂಶಗಳಿಗೆಂದು ತಾನು ನಿಗದಿಪಡಿಸಿರುವ ಶಿಷ್ಟತೆ ಮತ್ತು ಏಕ ರೂಪತೆಗಳನ್ನು ಹೊಂದಿರುವ ಒಂದು ಮಾದರಿ ಕನ್ನಡ ಲಿಪಿ ತಂತ್ರಾಂಶವನ್ನು ತನಗಾಗಿ ಸಿದ್ಧಪಡಿಸಿಕೊಡಲು ಕರ್ನಾಟಕ ಸರ್ಕಾರವು ಕನ್ನಡ ಗಣಕ ಪರಿಷತ್ತಿಗೆ ತಿಳಿಸಿದ್ದು ಮತ್ತೊಂದು ಅಭೂತಪೂರ್ವ ತೀರ್ಮಾನವಾಗಿದೆ. ಇದಕ್ಕೆ ಸ್ಪಂದಿಸಿದ ಕನ್ನಡ ಗಣಕ ಪರಿಷತ್ತು ಅಂತಹ ಒಂದು ಕನ್ನಡ ಲಿಪಿ ತಂತ್ರಾಂಶವನ್ನು ಸಿದ್ಧಪಡಿಸಿದೆ.
 

ಸರ್ಕಾರದ ಈ `ನುಡಿಕಿ ಲಿಪಿ ತಂತ್ರಾಂಶಕ್ಕೆ ಸಂಬಂಧಿಸಿದಂತೆ ನಡೆಯಬೇಕಾದ ಇನ್ನೂ ಹಲವಾರು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಲಾಗಿದೆ. ಅಲ್ಲದೇ ಸಾಮಾನ್ಯ ಬಳಕೆಗೆ ಅಗತ್ಯವಾದ ಹಲವು ಆನ್ವಯಿಕ ತಂತ್ರಾಂಶಗಳು ಸಿದ್ಧವಾಗಬೇಕಿದೆ. ಈ ಅಂಶಗಳನ್ನು ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರವು 'ಕಂಪ್ಯೂಟರ್ ಕನ್ನಡೀಕರಣ ಕ್ರಿಯಾಯೋಜನೆ' ಯನ್ನು ಸಿದ್ಧಪಡಿಸಿದೆ. ಈ ಕ್ರಿಯಾಯೋಜನೆಯ ಯಶಸ್ವೀ ಅನುಷ್ಠಾನದಿಂದ ಗಣಕಗಳಲ್ಲಿ ಕನ್ನಡದ ಬಳಕೆ ಸರಳವೂ, ಸುಲಭವೂ ಆಗುವುದೆಂದು ನಿರೀಕ್ಷಿಸಲಾ ಗಿದೆ. ಕ್ರಿಯಾಯೋಜನೆಯ ಕೆಲವು ಅಂಶಗಳನ್ನು ಇಂದು ಬಿಡುಗಡೆಯಾಗುತ್ತಿರುವ `ನುಡಿಕಿಯ ಆವೃತ್ತಿಯಲ್ಲಿ ಅಳವಡಿಸಲಾಗಿದೆ; ಉಳಿದ ಹಲವಾರು ಅಂಶಗಳನ್ನು ಸಾಧಿಸಲು ಪ್ರಯತ್ನಗಳಾಗುತ್ತಿವೆ. 
 

ಈ ಕನ್ನಡ ಲಿಪಿ ತಂತ್ರಾಂಶವು ಕನ್ನಡ ಮಾಹಿತಿಗಳ ಅಕಾರಾದಿ ವಿಂಗಡಣೆಯ ಸೌಲಭ್ಯವನ್ನು ಹೊಂದಿದೆ; ಹುಡುಕು, ಹುಡುಕು-ಬದಲಿಸು ಮುಂತಾದ ಸೌಲಭ್ಯಗಳನ್ನು ಕನ್ನಡದಲ್ಲೇ ನೀಡಲಾಗಿದೆ; ಬಹು ಮುಖ್ಯವಾಗಿ ಅರ್ಕಾವೊತ್ತಿನ ಮತ್ತು ಇತರ ಸಮಸ್ಯೆಗಳಿಗೆ ಸಮರ್ಪಕವಾದ ಪರಿಹಾರಗಳನ್ನು ಒದಗಿಸಿದೆ; ದತ್ತ ಸಂಸ್ಕರಣೆಗೆ ಅಗತ್ಯವಾದ ಅನುಕೂಲತೆಗಳನ್ನು ಒದಗಿಸಿದೆ; ಹತ್ತು ಅಕ್ಷರಶೈಲಿಗಳನ್ನು ನೀಡಲಾಗಿದೆ; ಪದಸಂಸ್ಕರಣೆಗೆ ಮತ್ತಷ್ಟು ಸೌಲಭ್ಯಗಳನ್ನು ನೀಡಿದೆ; ಅಂತರಜಾಲ ಮತ್ತು ಹಾಗೂ ವಿದ್ಯುನ್ಮಾನ ಅಂಚೆ ಕ್ಷೇತ್ರಗಳಲ್ಲೂ ಕನ್ನಡವನ್ನು ಯಶಸ್ವಿಯಾಗಿ ಬಳಸಲು ಸಾಧ್ಯವಾಗಿಸಿದೆ; ದತ್ತ ಸಂಸ್ಕರಣೆಯ ಸಂದರ್ಭಗಳಲ್ಲಿ, ಒಂದೇ ಪದಗುಚ್ಛದಲ್ಲಿ ತೀರ ಅನಿವಾರ್ಯವಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮಾಹಿತಿಗಳನ್ನು ದಾಖಲಿಸಿ ಬಳಸಬೇಕಾದರೆ ಅದಕ್ಕೆ ಅಗತ್ಯವಾದ ದ್ವಿಭಾಷಾತ್ಮಕ ಅಕ್ಷರಶೈಲಿಯನ್ನು ನೀಡಲಾಗಿದೆ ಹಾಗೂ ಇದಕ್ಕೆ ಅಗತ್ಯವಾದ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗಿದೆ; ಕನ್ನಡಕ್ಕೆ ಅಗತ್ಯವಾದ ಆನ್ವಯಿಕ ತಂತ್ರಾಂಶಗಳನ್ನು ಅಭಿವೃದ್ಧಿಗೊಳಿಸಲು ಅಗತ್ಯವಾದ ತಂತ್ರಾಂಶ ಅಭಿವೃದ್ಧಿ ಸಲಕರಣೆಗಳನ್ನು (ಖಠಜಿಣತಿಚಿಡಿಜ ಆಜತಜಟಠಠಿಟಜಟಿಣ ಣ) ನೀಡಲಾಗಿದೆ; ಬಹುಮುಖ್ಯವಾಗಿ, ಈ ಕನುಡಿಕಿ ಲಿಪಿ ತಂತ್ರಾಂಶವು ಸರ್ಕಾರವು ನಿಗದಿಪಡಿಸಿ ರುವ ಶಿಷ್ಟತೆ ಮತ್ತು ಏಕರೂಪತೆಗಳಿಗೆ ಇತರ ಕನ್ನಡ ಲಿಪಿ ತಂತ್ರಾಂಶಗಳು ಬದ್ಧವಾಗಿವೆಯೇ ಎಂಬುದನ್ನು ಸಾಮಾನ್ಯರೂ ಪರೀಕ್ಷಿಸಲು ಸಾಧ್ಯವಾಗುವಂತಹ ಮಾನದಂಡವಾಗಿದೆ. ಒಟ್ಟಿನಲ್ಲಿ ನುಡಿ ತಂತ್ರಾಂಶವು ಗಣಕ ಗಳಲ್ಲಿ ಕನ್ನಡದ ಬಳಕೆಯನ್ನು ಸುಗಮಗೊಳಿಸಿದೆ.
 

ಕನ್ನಡ ಲಿಪಿ ತಂತ್ರಾಂಶಗಳಿಗೆ ಏಕರೂಪ ಅಕ್ಷರಭಾಗಗಳು, ಇವುಗಳಿಗೆ ಂಖಅ ಸಂಕೇತಗಳು ಮತ್ತು ಕನ್ನಡದ ಅಗತ್ಯಗಳಿಗಾಗಿಯೇ ರೂಪಿಸಲಾದ ಏಖಅಐಕ (ಏಚಿಟಿಟಿಚಿಜಚಿ ಖಛಿಠಿಣ ಅಠಜಜ ಜಿಠಡಿ ಐಚಿಟಿರಣಚಿರಜ ಕಡಿಠಛಿಟಿರ) ಸಂಕೇತ ವ್ಯವಸ್ಥೆ ಮುಂತಾದವನ್ನು ನಿಗದಿಪಡಿಸಿರುವುದು ಮತ್ತು ಕರ್ನಾಟಕ ಸರ್ಕಾರವು ತನ್ನದೇ ಆದ ಒಂದು ಮಾದರಿ ಲಿಪಿ ತಂತ್ರಾಂಶವನ್ನು ಸಿದ್ಧಗೊಳಿಸಿಕೊಂಡಿರುವುದು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಯನ್ನು ಗಳಿಸಿದೆ.
 

ಭಾರತೀಯ ಭಾಷೆಗಳಿಗೆ ಯೂನಿಕೋಡ್ ಸಂಕೇತ ವ್ಯವಸ್ಥೆಗಳನ್ನು ಅಂತಿಮಗೊಳಿಸಬೇಕೆಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು 2001 ಸೆಪ್ಟೆಂಬರ್ 17 ಮತ್ತು 18ನೇ ದಿನಾಂಕಗಳಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಕರ್ನಾಟಕ ಸರ್ಕಾರದ ಮತ್ತು ಕನ್ನಡ ಗಣಕ ಪರಿಷತ್ತಿನ ಈ ಸಾಧನೆಗಳನ್ನು ಬಹುವಾಗಿ ಪ್ರಶಂಸಿಸಲಾಯಿತು. ಆಸ್ಕಿ (ಂಖಅ) ಮತ್ತು ಇಸ್ಕಿಗಳ (ಖಅ) ಅಳವಿನಲ್ಲಿಯೇ ಕನ್ನಡಕ್ಕಾಗಿ ಸಮರ್ಪಕ ಪರಿಹಾರಗಳನ್ನು ಕಂಡುಕೊಂಡಿರುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಭಾಷಾ ಪ್ರತಿನಿಧಿಗಳೂ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಇತರ ಭಾಷೆಗಳಿಗೂ ಈ ಮಾದರಿಯ ಶಿಷ್ಟತೆಗಳನ್ನು ನಿಗದಿಪಡಿಸುವ ಪ್ರಕ್ರಿಯೆಗಳು ಅಂದೇ ಆರಂಭವಾದವು. ಕನ್ನಡದ ಮಾದರಿಯಂತೆ ಇತರ ಭಾಷಾಲಿಪಿಗಳಿಗೆ ಶಿಷ್ಟತೆ ಮತ್ತು ಏಕರೂಪತೆಗಳನ್ನು ನಿಶ್ಚಯಿಸುವ ಕಾರ್ಯಗಳು ಇದೀಗ ಆರಂಭದ ಹಂತವನ್ನು ಮುಟ್ಟಿವೆ. ಆದರೆ ಕನ್ನಡಕ್ಕೆ ಸಂಬಂಧಿಸಿದಂತೆ ಶಿಷ್ಟತೆ ಮತ್ತು ಏಕರೂಪತೆಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕೆ ಇದೊಂದು  ಹೆಮ್ಮೆಯ ವಿಷಯ.
 

ನುಡಿ 3.0 ಲಿಪಿ ತಂತ್ರಾಂಶವನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಸ್ ಎಂ ಕೃಷ್ಣ ಅವರು 23.07.2002 ಬಿಡುಗಡೆ ಮಾಡಿದ್ದಾರೆ.
 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯಗಳ ಸಂಯುಕ್ತ ಆಶ್ರಯ ದಲ್ಲಿ ದಿನಾಂಕ 23.10.2001 ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ `ನುಡಿಕಿ ಕನ್ನಡ ಲಿಪಿ ತಂತ್ರಾಂಶದ ಹಿಂದಿನ ಆವೃತ್ತಿಯನ್ನು ಹಾಗೂ ಕಂಪ್ಯೂಟರ್ ಕನ್ನಡೀಕರಣ ಕ್ರಿಯಾಯೋಜನೆ ಪುಸ್ತಕವನ್ನು ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವರಾಗಿದ್ದ ಪ್ರೊ. ಬಿ ಕೆ ಚಂದ್ರಶೇಖರ್ ಅವರು ಉದ್ಾಟಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಬರಗೂರು ರಾಮಚಂದ್ರಪ್ಪನವರು ತಮ್ಮ ಆಶಯನುಡಿಯಲ್ಲಿ ಸಮಾನ ಕನ್ನಡ ಲಿಪಿ ತಂತ್ರಾಂಶದ ಮತ್ತು ಕ್ರಿಯಾಯೋಜನೆಯ ಉದ್ದೇಶ ಮತ್ತು ಮಹತ್ವಗಳನ್ನು ನಿರೂಪಿಸಿದರು. ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಶ್ರೀ ವಿವೇಕ ಕುಲಕರ್ಣಿ ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಶ್ರೀ ಸಿ ಎಸ್ ಕೇದಾರ್ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
 

ಕನ್ನಡ ಪರವಾದ ಈ ಪ್ರಮುಖ ಚಟುವಟಿಕೆಗಳಿಗೆ ಜವಾಬ್ದಾರರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪನವರು, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಶ್ರೀ ವಿವೇಕ ಕುಲಕರ್ಣಿಯವರು ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯದ ನಿರ್ದೇಶಕ ಡಾ. ಇ ವಿ ರಮಣರೆಡ್ಡಿ ಯವರು   ಕನ್ನಡದ ಹಿತ ಕಾಯುವಲ್ಲಿ  ಸೂಕ್ತವಾದ ನೀತಿ, ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.